BenQ ಸಂಸ್ಥೆಯು ಇದೀಗ ದೇಶಿಯ ಮಾರುಕಟ್ಟೆಗೆ ಹೊಸದಾಗಿ GW2790Q ಮಾನಿಟರ್ ಅನ್ನು ಲಾಂಚ್ ಮಾಡಿದೆ. ಈ ಮಾನಿಟರ್ 2K QHD ಮಾದರಿ ಜೊತೆಗೆ 100Hz ರಿಫ್ರೆಶ್ ರೇಟ್ ಅನ್ನು ಪಡೆದುಕೊಂಡಿದೆ. ಇದು 350 nits ಬ್ರೈಟ್ನೆಸ್ ಸಪೋರ್ಟ್ ಒದಗಿಸಲಿದ್ದು, 178 ಡಿಗ್ರಿ ವೀಕ್ಷಣೆಯ ನೋಟ ಹೊಂದಿದೆ.
ಸಂಸ್ಥೆಯ ನೂತನ GW2790Q ಮಾನಿಟರ್ (GW2790Q monitor) 27 ಇಂಚಿನ ಗಾತ್ರದಲ್ಲಿ ಇದ್ದು, Eye-Care ತಂತ್ರಜ್ಞಾನವನ್ನು ಒಳಗೊಂಡಿದೆ. ಹಾಗೆಯೇ ಇದು 2560 x 1440 ಪಿಕ್ಸಲ್ ರೆಸಲ್ಯೂಶನ್ ಸೌಲಭ್ಯ ಹೊಂದಿದೆ. ಅಲ್ಲದೇ ಇದು ಆಂಟಿ – ಗ್ಲೇರ್ ಸ್ಕ್ರೀನ್ ಕೋಟಿಂಗ್ ಪಡೆದುಕೊಂಡಿದೆ. ಎರಡು HDMI ಪೋರ್ಟ್ಗಳ ಆಯ್ಕೆಯನ್ನು ಇದು ಪಡೆದಿದೆ.
ಅಂದಹಾಗೆ BenQ ಕಂಪನಿಯ ಹೊಸ GW2790Q ಮಾನಿಟರ್ 14,990ರೂ. ಗಳ ಪ್ರೈಸ್ಟ್ಯಾಗ್ ಅನ್ನು ಪಡೆದುಕೊಂಡಿದೆ. ಗ್ರಾಹಕರು ಈ ಮಾನಿಟರ್ ಅನ್ನು ಅಮೆಜಾನ್ ಇ-ಕಾಮರ್ಸ್ ಹಾಗೂ BenQ ಇ-ಸ್ಟೋರ್ ಪ್ಲಾಟ್ಫಾರ್ಮ್ಗಳ ಮೂಲಕ ಖರೀದಿ ಮಾಡಬಹುದು.