ದೇಶದ ಅತಿದೊಡ್ಡ ಗ್ರಾಹಕ ಎಲೆಕ್ಟ್ರಾನಿಕ್ಸ್ ಬ್ರಾಂಡ್ ಎನಿಸಿರುವ ಸ್ಯಾಮ್ಸಂಗ್ ಸಂಸ್ಥೆಯು 2024 ರ ಕ್ಯಾಲೆಂಡರ್ ವರ್ಷದಲ್ಲಿ ತನ್ನ ಟೆಲಿವಿಷನ್ ವ್ಯವಹಾರವು 10,000 ಕೋಟಿ ರೂ. ಮಾರಾಟವನ್ನು ದಾಟಿದೆ ಎಂದು ಇಂದು ಘೋಷಿಸಿದೆ.
ಸ್ಯಾಮ್ ಸಂಗ್ ಭಾರತದ ಟೆಲಿವಿಷನ್ ಉದ್ಯಮದಲ್ಲಿ ಈ ಗಮನಾರ್ಹ ಮೈಲಿಗಲ್ಲನ್ನು ಸಾಧಿಸಿದ ಮೊದಲ ಬ್ರಾಂಡ್ ಆಗಿದೆ. 2025 ರಲ್ಲಿ ಬಿಗ್ ಸ್ಕ್ರೀನ್, ಎಐ- ಆಧರಿತ ಟೆಲಿವಿಷನ್ಗಳಿಗೆ ಹೆಚ್ಚುತ್ತಿರುವ ಬೇಡಿಕೆ ಮತ್ತು ವಿಶಾಲವಾದ ಪ್ರೀಮಿಯಂ ಉತ್ಪನ್ನಗಳ ಸಂಗ್ರಹದ ಕಾರಣದಿಂದ ಎರಡಂಕಿಯ ಬೆಳವಣಿಗೆಯನ್ನು ಸಾಧಿಸುವ ವಿಶ್ವಾಸವನ್ನು ಸ್ಯಾಮ್ಸಂಗ್ ವ್ಯಕ್ತಪಡಿಸಿದೆ.
ಸ್ಯಾಮ್ಸಂಗ್ ಇತ್ತೀಚೆಗೆ ಭಾರತದಲ್ಲಿ ತನ್ನ 2025 ರ ಟಿವಿ ಶ್ರೇಣಿಯಾದ ವಿಷನ್ ಎಐ ಆಧರಿತ ಟೆಲಿವಿಷನ್ಗಳನ್ನು ಅನಾವರಣಗೊಳಿಸಿತು, ಇದರಲ್ಲಿ ನಿಯೋ ಕ್ಯೂಎಲ್ಇಡಿ 8K, ನಿಯೋ ಕ್ಯೂಎಲ್ಇಡಿ 4K, ಓಎಲ್ಇಡಿ, ಕ್ಯೂಎಲ್ಇಡಿ ಮತ್ತು ದಿ ಫ್ರೇಮ್ನಾದ್ಯಂತ 40ಕ್ಕೂ ಹೆಚ್ಚು ಮಾದರಿಗಳನ್ನು ಪರಿಚಯಿಸಲಾಗಿದೆ.
49,490 ರೂ. ಇಂದ 11,00,000 ರೂ. ವರೆಗಿನ ಬೆಲೆಯ 2025ರ ಟಿವಿ ಶ್ರೇಣಿಯು, ಅತ್ಯಾಧುನಿಕ ಆವಿಷ್ಕಾರಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಸ್ಯಾಮ್ಸಂಗ್ನ ಕಾರ್ಯತಂತ್ರವನ್ನು ಸಾರುತ್ತವೆ. ವಿಷನ್ ಎಐ ಆಧರಿತ ಶ್ರೇಣಿಯು ಎಐ ಅಪ್ಸ್ಕೇಲಿಂಗ್ ಪ್ರೊ, ಗ್ಲೇರ್-ಫ್ರೀ ವೀಕ್ಷಣೆ ಮತ್ತು ಜನರೇಟಿವ್ ಆರ್ಟ್ ವಾಲ್ಪೇಪರ್ಗಳಂತಹ ಆವಿಷ್ಕಾರಗಳನ್ನು ಪರಿಚಯಿಸುತ್ತದೆ.
ಸ್ಯಾಮ್ಸಂಗ್ ತನ್ನ 43- ಇಂಚಿನ ಮತ್ತು ಜನಸಾಮಾನ್ಯರ ಮಾರುಕಟ್ಟೆ ಶ್ರೇಣಿಯ ಟಿವಿಯ ಮೂಲಕ ಕಡಿಮೆ ದರದ ಉತ್ಪನ್ನ ಬಯಸುವ ಗ್ರಾಹಕರಿಗೆ ಸೇವೆ ಸಲ್ಲಿಸುವ ಮೂಲಕ ಭಾರತದ ಟಿವಿ ಮಾರುಕಟ್ಟೆಯಲ್ಲಿ ದೀರ್ಘಾವಧಿಯ ನಾಯಕನ ಸ್ಥಾನದಲ್ಲಿದೆ.