ನು ರಿಪಬ್ಲಿಕ್ (nu Republic) ಭಾರತದಲ್ಲಿ ಬೀಟ್ಪಾಪ್ (beatpop kids) ಕಿಡ್ಸ್ ವೈರ್ಲೆಸ್ ಹೆಡ್ಫೋನ್ ಅನ್ನು ಪರಿಚಯಿಸಿದ್ದು, ಈ ಮೂಲಕ ತನ್ನ ಆಡಿಯೊ ಶ್ರೇಣಿಯನ್ನು ವಿಸ್ತರಿಸಿದೆ.
ನೂತನ ಬೀಟ್ಪಾಪ್ ಕಿಡ್ಸ್ ಹೆಡ್ಫೋನ್ ಆರಾಮ, ಬಾಳಿಕೆ ಮತ್ತು ಮಕ್ಕಳ ಸ್ನೇಹಿ ಬಳಕೆಗಾಗಿ ವಿನ್ಯಾಸಗೊಳಿಸಲಾಗಿದೆ. ಹಾಗೆಯೇ ಇದು ಬ್ಲೂಟೂತ್ v5.3 ಅನ್ನು ಬಳಸುತ್ತವೆ ಮತ್ತು Xbass ತಂತ್ರಜ್ಞಾನದೊಂದಿಗೆ 40mm ಡೈನಾಮಿಕ್ ಡ್ರೈವರ್ಗಳನ್ನು ಒಳಗೊಂಡಿವೆ.
ಅಲ್ಲದೇ ಈ ಹೆಡ್ ಫೋನ್ 42 ಗಂಟೆಗಳ ಬ್ಯಾಟರಿ ಬ್ಯಾಕ್ ಅಪ್ ಸೌಲಭ್ಯ ಪಡೆದಿದ್ದು, ಡ್ಯುಯಲ್ ಕನೆಕ್ಟಿವಿಟಿ ಆಯ್ಕೆ ಹೊಂದಿದೆ.
ಬೆಲೆ ಮತ್ತು ಲಭ್ಯತೆ
ನು ರಿಪಬ್ಲಿಕ್ ಬೀಟ್ಪಾಪ್ ಕಿಡ್ಸ್ ವೈರ್ಲೆಸ್ ಹೆಡ್ಫೋನ್ ಬೆಲೆ 1299ರೂ. ಆಗಿದೆ. ಈ ಡಿವೈಸ್ ಅಧಿಕೃತ ನು ರಿಪಬ್ಲಿಕ್ ವೆಬ್ಸೈಟ್ ಮೂಲಕ ಖರೀದಿಗೆ ಲಭ್ಯ.