ಹುಬ್ಬಳ್ಳಿ : ಇಲ್ಲಿಯ ಭೈರಿದೇವರಕೊಪ್ಪ ರೇಣುಕಾ ನಗರದ ಶಿವಾನಂದ ಶಾಲೆಯ ಕಾಂಪೌಂಡ್ ಪಕ್ಕದಲ್ಲಿ ಮಳೆ ನೀರು ಹರಿದು ಹೋಗಲು ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದೇ ಶಾಲೆ ಪಕ್ಕದ ಮನೆಗಳ ಜನರು ಸಂಕಷ್ಟ ಎದುರಿಸುವಂತಾಗಿದೆ.
ಮಳೆ ಬಂದಾಗಲೆಲ್ಲಾ ಶಾಲೆಯ ಕಾಂಪೌಂಡ್ ಪಕ್ಕದ ಮನೆಗಳ ಮುಂದೆ ನೀರು ರಭಸದಿಂದ ಹರಿಯುತ್ತದೆ. ಮನೆಗಳಿಗೆ ನೀರು ನುಗ್ಗುವ ಆತಂಕ ಇದ್ದು, ಮಳೆ ನೀರು ಮನೆಯೊಳಗೆ ಬಾರದಂತೆ ತಡೆಯುವುದೇ ದೊಡ್ಡ ಕೆಲಸವಾಗಿದೆ ಎಂದು ಸ್ಥಳೀಯರು ಅಸಮಾಧಾನ ಹೊರಹಾಕಿದ್ದಾರೆ.