ಸ್ಪ್ಯಾಮ್ ವಿರುದ್ಧ ತನ್ನ ಹೋರಾಟವನ್ನು ಮುಂದುವರೆಸುತ್ತಾ, ಏರ್ಟೆಲ್ ಇಂದು ವಾಟ್ಸಾಪ್, ಟೆಲಿಗ್ರಾಮ್, ಫೇಸ್ಬುಕ್, ಇನಸ್ಟಾಗ್ರಾಮ್, ಎಸ್ಎಂಎಸ್ ರೀತಿಯ ಓಟಿಟಿಗಳು, ಇಮೇಲ್ ಗಳು, ಬ್ರೌಸರ್ ಸೇರಿದಂತೆ ವೇದಿಕೆಗಳು ಮತ್ತು ಓವರ್-ದಿ-ಟಾಪ್ (ಓಟಿಟಿ) ಆಪ್ಸ್ ಮತ್ತು ಎಲ್ಲಾ ಸಂವಹನ ವೇದಿಕೆಗಳಾದ್ಯಂತ ರಿಯಲ್ ಟೈಮ್ ನಲ್ಲಿ ನಕಲಿ ಮತ್ತು ಮೋಸದ ಜಾಲತಾಣಗಳನ್ನು ಪತ್ತೆಮಾಡುವ ಮತ್ತು ನಿರ್ಬಂಧಿಸುವ ನವೀನ ತಂತ್ರಜ್ಞಾನ ಪರಿಹಾರವೊಂದನ್ನು ಪರಿಚಯಿಸುತ್ತಿದೆ.
ಈ ಸುರಕ್ಷಿತ ಸೇವೆಯನ್ನು ಯಾವುದೇ ಹೆಚ್ಚುವರಿ ಶುಲ್ಕಗಳಿಲ್ಲದೆ ಎಲ್ಲಾ ಏರ್ಟೆಲ್ ಮೊಬೈಲ್ ಮತ್ತು ಬ್ರಾಡ್ ಬ್ಯಾಂಡ್ ಗ್ರಾಹಕರಿಗೆ ಸಾಟಿಯಿಲ್ಲದೆ ಸಂಯೋಜಿಸಿ, ಸ್ವಯಂ-ಸಕ್ರಿಯಗೊಳಿಸಲಾಗುತ್ತದೆ. ಏರ್ಟೆಲ್ ನ ಸುಧಾರಿತ ಭದ್ರತಾ ವ್ಯವಸ್ಥೆಯ ಮೂಲಕ ಮೋಸ ಅಥವಾ ನಕಲಿ ಎಂದು ಗುರುತಿಸಲ್ಪಟ್ಟ ಜಾಲತಾಣವನ್ನು ಒಬ್ಬ ಗ್ರಾಹಕನು ಪ್ರವೇಶಿಸಲು ಬಯಸಿದರೆ, ಪುಟ ಲೋಡ್ ಆಗುವುದು ನಿರ್ಬಂಧವಾಗುತ್ತದೆ ಮತ್ತು ನಿರ್ಬಂಧದ ಕಾರಣವನ್ನು ವಿವರಿಸುವ ಪುಟಕ್ಕೆ ಗ್ರಾಹಕರನ್ನು ನಿರ್ದೇಶಿಸಲಾಗುತ್ತದೆ.
ಡಿಜಿಟಲ್ ವೇದಿಕೆಗಳು ದೇಶಾದ್ಯಂತ ಹೆಚ್ಚು ಸರ್ವತ್ರವಾಗಿರುತ್ತಿರುವುದರಿಂದ ಪ್ರತಿ ದಿನ ಆನ್ಲೈನ್ ವಂಚನೆಯ ಬೆದರಿಕೆ ಹೆಚ್ಚಾಗುತ್ತಿದೆ ಮತ್ತು ಗ್ರಾಹಕರಿಗೆ ಗಂಭೀರ ಅಪಾಯವನ್ನು ಒಡ್ಡುತ್ತಿದೆ. ಕಳೆದ ಕೆಲವು ದಿನಗಳಲ್ಲಿ ಅಂತಹ ಬೆದರಿಕೆಗಳಲ್ಲಿ ಆತಂಕಕಾರಿ ಏರಿಕೆ ಕಂಡುಬಂದಿದೆ.
ವಂಚನೆಯ ಸ್ಕೀಮ್ ಗಳು ಒಟಿಪಿ ವಂಚನೆಗಳು ಮತ್ತು ಮೋಸದ ಕರೆಗಳನ್ನು ಮೀರಿ ಬೆಳೆದು ನಿಂತಿವೆ, ಈ ಮೂಲಕ ವಂಚನೆಯ ಆನ್ಲೈನ್ ಸ್ಕೀಮ್ ಗಳಿಗೆ ಸಹಸ್ರಾರು ಜನರು ವಂಚನೆ ಆಗಿರುವುದನ್ನು ಇತ್ತೀಚಿನ ವರದಿಗಳಲ್ಲಿ ಕಾಣಬಹುದು.
ಈ ಸಮಸ್ಯೆಯ ಆಳವನ್ನು ಗುರುತಿಸಿ, ಏರ್ಟೆಲ್ ಒಂದು ಎಐ-ಚಾಲಿತ, ಬಹು-ಹಂತವುಳ್ಳ ಬುದ್ದಿವಂತಿಕೆ ವೇದಿಕೆಯನ್ನು ಅಳವಡಿಸಿದ್ದು, ಇದು ಮೋಸ ಮತ್ತು ವಂಚನೆಯ ಸಮಗ್ರ ಜಾಲದಿಂದ ಗ್ರಾಹಕರನ್ನು ಸುರಕ್ಷಿತವಾಗಿಡುತ್ತದೆ. ಇದು ಸಾಧನಗಳಾದ್ಯಂತ ಲಿಂಕ್ ಬ್ಲಾಕ್ ಮಾಡುವುದು ಮತ್ತು ಎಲ್ಲಾ ವೇದಿಕೆಗಳಾದ್ಯಂತ ಡೊಮೇನ್ ಫಿಲ್ಟರ್ ಮಾಡುವ ಮೂಲಕ ಅತ್ಯಾಧುನಿಕ ಬೆದರಿಕೆ ಪತ್ತೆಹಚ್ಚುವಿಕೆ ವೇದಿಕೆಯನ್ನು ಪರಿಚಯಿಸುವ ಉದ್ದೇಶವನ್ನು ಹೊಂದಿದೆ.
ಸದ್ಯ ಈ ಸೇವೆಯು ಹರಿಯಾಣ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಲಭ್ಯವಿದ್ದು, ಅತಿ ಶೀಘ್ರದಲ್ಲಿಯೇ ದೇಶಾದ್ಯಂತ ಸಹ ಲಭ್ಯವಾಗಲಿದೆ.